ಮುಂಜಾನೆದ್ದು ಮುಸುಕು ಸರಿಸಿ ಕಣ್ಣುಜ್ಜಿಕೊಂಡು ಹೊರಬಂದಕೂಡಲೇ ಈ ಟೆನ್ಶನ್ ಎಂಬ ಪೆಡಂಭೂತ ಮನಸ್ಸನ್ನಾವರಿಸಿಕೊಳ್ಳುತ್ತದೆ. ನಿತ್ಯ ವಿಧಿ ಪೂರೈಕೆಗೆ ಮೊದಲೇ ಈ ಭೂತ ಆವರಿಸಿಕೊಂಡರಂತೂ ಮತ್ತೆ ಆ ದಿನದ ಕಥೆ ಕೇಳೋದೇ ಬೇಡ.
ದಿನದ ದಿನಚರಿಯ ಆರಂಭದಲ್ಲೇ ಮನಸ್ಸು ಒಲ್ಲೆ ಎಂದರೆ ಮುಂದುವರಿದ ಕರ್ಮಗಳೆಲ್ಲವೂ ನಮ್ಮ ಅಡುಭಾಷೆಯಲ್ಲಿ `ಮುಗಿದ ಕಥೆಯೇ'. ಇದರಿಂದ ಹೊರಬರುವ ವಿಧಾನಗಳೇ ಇಲ್ಲವೆಂದಲ್ಲ. ಅದರಲ್ಲಿ ತೊಡಗಿಸಿಕೊಳ್ಳಲು ಮಾತ್ರ ಮನಸ್ಸು ಒಪ್ಪೋದೇ ಇಲ್ಲ. ಹೋಗಲಿ ಇಂದು ಬೇಡ. ನಾಳೆ ಮಾಡಿದರಾಯ್ತು ಎಂದು ಮುಂದೂಡುವ ಬಗೆ ಇದೆಯಲ್ಲ. ಅದು ಕೇವಲ ಪತ್ರಿಕೋದ್ಯಮಕ್ಕೆ ಮಾತ್ರವಲ್ಲ. ಯಾವುದೇ ಕಾರ್ಯಕ್ಕೂ ಶುಭಸೂಚಕವಲ್ಲ.
ಒಲ್ಲದ ಮನಸ್ಸಿನಿಂದಲೇ ಎಲ್ಲವನ್ನೂ ಪೂರೈಸಿ ಹೊರಬಂದಾಗ ಮನಸ್ಸು ಪ್ರಫುಲ್ಲಗೊಳ್ಳಲು ಅಥವ ಪ್ರಕ್ಷುಬ್ಧಗೊಳ್ಳಲು ಯಾವುದೇ ಒಂದು ಸಣ್ಣ ವಿಚಾರವೂ ಸಾಕು ಸಂಚಲನ ಸೃಷ್ಠಿಸಿಬಿಡುತ್ತದೆ. ನಡೆವ ದಾರಿಯ ಮಧ್ಯೆ ಮುಗ್ಧ ಮಗುವೊಂದು ತನ್ನವರೊಂದಿಗೆ ಬಾಲ್ಯ ಭಾಷೆಯಲ್ಲಿ ಹರಟುತ್ತಾ ಸಾಗುತ್ತಿರುವುದನ್ನಷ್ಟೇ ನೋಡಿದರೆ ಸಾಕು ಮನಸ್ಸಿನ ಆ ದುಗುಡದ ಜಾಗದಲ್ಲಿ ಸಂತಸ ಮನೆಮಾಡಿಕೊಳ್ಳುತ್ತದೆ. ಮನೆಯ ಮೆಟ್ಟಲಿಳಿದು ಹೊರಬಂದಾಗ ಸಂಪರ್ಕ ಕಲ್ಪಿಸುವ ನಮ್ಮ ಸೆಲ್ ಫೋನ್ಗೆ ಅನಾಮಿಕನೊಬ್ಬ ಕರೆ ಮಾಡಿ `ಯಾರು ಮಾತಾಡೋದು' ಎಂದು ಸೌಮ್ಯವಾಗಿ ಕೇಳಿದರೂ ಸಾಕು ಪಿತ್ತ ನೆತ್ತಿಗೇರಿ ಬಿಡುತ್ತದೆ. ಕಾಲ್ ಮಾಡಿದ್ದು ನೀವು, ನನ್ನನ್ನೇ ಕೇಳ್ತೀರಲ್ರೀ ನೀವು ಯಾರೂಂತ' ಎಂದು ಫೋನ್ ಕಟ್ ಮಾಡಿ ಕಿಸೆಯಲ್ಲಿಟ್ಟುಕೊಂಡಾಗ ಮನಸ್ಸು ಮತ್ತೆ ರಾಡಿಯಾಗಿ ಹೋಗುತ್ತದೆ.